Home



ಹೆಚ್.ಡಿ.ಕೋಟೆ ಸ್ಥಳೀಯ ಸಂಸ್ಥೆಯ ಬಗ್ಗೆ

                      ಹೆಚ್.ಡಿ.ಕೋಟೆ (ಹೆಗ್ಗಡದೇವನ ಕೋಟೆ) ಸ್ಥಳೀಯ ಸಂಸ್ಥೆಯ 1996 ರಲ್ಲಿ ಪಟ್ಟಣ ಪಂಚಾಯಿತಿಯಾಯಿತು. ಪಟ್ಟಣದ ಜನಸಂಖ್ಯೆ 2001 ಜನಗಣತಿಯಂತೆ 12045. ಪಟ್ಟಣಲ್ಲಿ 13 ವಾರ್ಡ್ ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳು ಆಗಿರುತ್ತಾರೆ. ಹಾಗೂ 3 ಜನ ನಾಮನಿರ್ದೇಶನ ಸದಸ್ಯರಿರುತ್ತಾರೆ. ಪಟ್ಟಣವು 13 .ಕಿ.ಮೀ. ವ್ಯಾಪಿಸಿದೆ. ಮತ್ತು ಮೈಸೂರಿನಿಂದ 50 ಕಿ.ಮೀ. ದೂರದಲ್ಲಿದೆ ಪಟ್ಟಣಕ್ಕೆ ಕಬಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ.

        ಹೆಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಾಲ್ಕು ಜಲಾಶಯಗಳಿವೆ. ಅವುಗಳೆಂದರ, ಕಬಿನಿ, ನುಗು, ಹೆಬ್ಬಾಳ ಮತ್ತು ತಾರಕ ಜಲಾಶಯಗಳು. ಇಲ್ಲಿನ ಜನರ ಪ್ರಮುಖ ವೃತ್ತಿ ವ್ಯವಸಾಯವಾಗಿದ್ದು, ಹತ್ತಿ, ಕಬ್ಬು, ಭತ್ತ ಮತ್ತು ತಂಬಾಕು ಪ್ರಮುಖ ಬೆಳೆಗಳಾಗಿವೆ. ಹೆಚ್.ಡಿ.ಕೋಟೆಯಲ್ಲಿ ಪ್ರವಾಸಿ ತಾಣಗಳಾದ ನಾಗರಹೊಳೆ, ಬಂಡೀಪುರ, ಕಾರಪುರ ಮತ್ತು ಚಿಕ್ಕದೇವಮ್ಮನ ಬೆಟ್ಟ ಮುಂತಾದ ಪ್ರಸಿದ್ದ ಸ್ಥಳಗಳಿವೆ



A brief note on H.D.Kote Town

                  Town Panchayat, H.D.Kote was constituted in 1996. It has a population of 12045 according to the census of 2001. The Town Panchayat has 13 Wards and equal number of Councillors and 3 Nominated Councillors. H.D.Kote TP stretches to an area of 13 Sq. KMs. The distance from Mysore 50 KM. Water is supplying to the town from Kabini River.

H.D.Kote has four reservoirs. They are The Kabini, Nugu, Hebbala and Taraka reservoirs. Agriculture is the main occupation and the major crofts are Cotton, Sugarcane, Rice and Tobacco. And the famous Tourist places are Nagarahole, Bandipura, Karapura and Chikkadevamma hills.



ಗಣಕೀಕರಣದ ಬಗ್ಗೆ

                  ಪಟ್ಟಣ ಪಂಚಾಯಿತಿಯು 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ.ಸಾರ್ವಜನಿಕ ಕುಂದುಕೊರತೆ ಮತ್ತು ನಿವಾರಣೆ ವಿಭಾಗವನ್ನು ತೆರೆದಿದ್ದು, ಸಾರ್ವಜನಿಕರಿಂದ ಬರುವ ದೂರುಗಳನ್ನು ಆನ್ ಲೈನ್ ಅಪ್ಲಿಕೇಷನ್ ನಲ್ಲಿ ದಾಖಲು ಮಾಡಲಾಗುತ್ತಿದೆ.



COMPUTARIZATION

                  We are very happy to intimate the citizens of H.D.Kote town that we have computerizes the Birth and Death records from 1990 to till date under state Government KMRP computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility. Public Grievances and Redressal Cell Opened and Complaints which received from publics are registering in Online.



ಘನತ್ಯಾಜ್ಯ ವಸ್ತು ಸಂಗ್ರಹಣೆ

                  ಪಟ್ಟಣ ಪಂಚಾಯಿತಿಯ 13 ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ ಸಂಗ್ರಹಣೆ, ಬೀದಿಗುಡಿಸುವುದು, ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ. ಪಟ್ಟಣದ ಎಲ್ಲಾ 13 ವಾರ್ಡುಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಸಂಖ್ಯೆ: 08228-255327 ಸಂಪರ್ಕಿಸುವುದು. ಸಾರ್ವಜನಿಕರು ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕರಿಸಿ.

ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಹೆಚ್.ಡಿ.ಕೋಟೆ.



Solid Waste Management

              Solid Waste Management is done by Town Panchayat. It is of two package system comprising primary collection, street sweeping and transportation to landfill site. Door-to-Door collections are done in all 13 Wards. Citizens have to pay user charges as per the MSW-rules for door-to-door collections. If you have any complaints concerning to solid waste management please call our helpline no: 08228-255327. Help us to keep your city clean and hygienic

– Chief Officer, TP, H.D.Kote.



 

ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು

                               ಇಂದು ನಗರ ಜೀವನ ವ್ಯವಸ್ಥೆಯು ಸಮರ್ಪಕವಾಗಿರಲು ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ.ಈಗ ಪಟ್ಟಣ ಪಂಚಾಯಿತಿಯ ಮುಖಾಂತರ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು,ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿರ್ವಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿರ್ವಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು. ಹಣಕಾಸು ನಿರ್ವಹಣೆಯಲ್ಲಿ ಮತ್ತು ಇತರೆ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು.

 

ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳು ಕೆಳಕಂಡಂತಿವೆ:

  • ಪಟ್ಟಣ, ನಗರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
  • ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
  • ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
  • ರಸ್ತೆಗಳು ಮತ್ತು ಸೇತುವೆಗಳನ್ನು ನಿಮಿðಸುವುದು.
  • ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು.
  • ಜನರ ಆರೋಗ್ಯ, ನೈಮðಲ್ಯ ಕಾಪಾಡುವುದು.
  • ಸಮಾಜದ ದುಬðಲ ವಗðಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
  • ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
  • ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ನಗರದ ಬಡತನ ನಿವಾರಣೆ.
  • ಬೀದಿದೀಪ, ಬಸ್ ನಿಲ್ದಾಣ, ಸಾವðಜನಿಕ ಶೌಚಾಲಯಗಳಂಥ ಮೂಲಸೌಕಯðಗಳನ್ನು ಒದಗಿಸುವುದು.
  • ಸ್ಮಶಾನ ಮತ್ತು ಸ್ಮಶಾನ ಭೂಮಿ,ಅಂತ್ಯ ಸಂಸ್ಕಾರ,ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು.
  • ಜನನ-ಮರಣ ನೊಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
  • ಕಸಾಯಿಖಾನೆಗಳ ನಿಯಂತ್ರಣ.
  • ಸರ್ಕಾರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ.
  • ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
  • ರಸ್ತೆ, ಬೀದಿಗಳ ದುರಸ್ತಿ ಮತ್ತು ನಿರ್ವಹಣೆ.
  • ಅಪಾಯಕಾರಿ ರೋಗಗಳ ನಿಯಂತ್ರಣ.

   ಇವುಗಳು ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ  ಸದಾ ತೊಡಗಿರುತ್ತದೆ.

 

T

This Page is maintained by: Chief Officer               Last Updated:19-03-2012

No. Of Visitors :
Last Updated   : 28/03/2012  Release History
Release 2.0.0, Powered By Karnataka Municipal Data Society & maintained by H.D.Kote TP
This website can best viewed with the resolution 1024 * 768 using Internet Explorer 7.0 or above.
Valid CSS!